ಒಎಐ ನ ತನಿಖಾ ಆದೇಶವೇನು?
ಒಎಐ ನ ತನಿಖಾ ವಿಭಾಗವು, ಯುಎನ್ಡಿಪಿ ಸಿಬ್ಬಂದಿ ಸದಸ್ಯರನ್ನು ಒಳಗೊಂಡು ಆರೋಪಿಸಲಾದ ತಪ್ಪೆಸಗುವಿಕೆಯ ಎಲ್ಲಾ ವರದಿಗಳನ್ನು ಮತ್ತು ಯುಎನ್ಡಿಪಿ ವಿರುದ್ಧ ವಂಚನೆ ಮತ್ತು ಭ್ರಷ್ಟಾಚಾರದ ಆರೋಪಗಳ, ಅದನ್ನು ಯುಎನ್ಡಿಪಿ ಸಿಬ್ಬಂದಿ ಸದಸ್ಯರು ಮಾಡಿರಲಿ ಅಥವಾ ಯುಎನ್ಡಿಪಿ ಗೆ ಕೇಡುಂಟುಮಾಡುವ ತಪ್ಪೆಸಗುವಿಕೆ ಇದ್ದಲ್ಲಿ ಇತರ ವ್ಯಕ್ತಿಗಳು, ಪಕ್ಷಗಳು ಅಥವಾ ಘಟಕಗಳು ಮಾಡಿರಲಿ, ಎಲ್ಲಾ ವರದಿಗಳನ್ನು ತನಿಖೆ ಮಾಡಲು ಆದೇಶ ಹೊಂದಿದೆ. ಯುಎನ್ಡಿಪಿಯಲ್ಲಿ ತನಿಖೆಗಳನ್ನು ನಡೆಸಲು ಆದೇಶ ಹೊಂದಿರುವ ಏಕೈಕ ಕಚೇರಿ ಒಎಐ ಆಗಿದೆ.